ಮಾಸನೂರು
ವೀರಶೈವರ ಪುಣ್ಯಕ್ಷೇತ್ರ. ಇದು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿ ಭೀಮಾನದಿಯ ತೀರದಲ್ಲಿದೆ. ಇಲ್ಲಿ ಮಲ್ಲಿಕಾರ್ಜುನ ಮತ್ತು ರೇವಣಸಿದ್ಧರ ದೇವಾಲಯಗಳಿವೆ. ವೀರಶೈವ ಆಚಾರ್ಯರಲ್ಲಿ ಒಬ್ಬನಾದ 12ನೆಯ ಶತಮಾನದ ರೇವಣಸಿದ್ಧೇಶ್ವರ ಇಲ್ಲಿ ತಪಸ್ಸು ಮಾಡಿದನೆಂದು ರೇವಣಸಿದ್ಧ ಪುರಾಣದಿಂದ ತಿಳಿದುಬರುತ್ತದೆ. ಭೀಮಾನದಿಯ ದಡದಲ್ಲಿರುವುದರಿಂದ ರಮಣೀಯವಾಗಿದೆ.
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ